ಸ್ವರ ಸಹಿತವಾದ (ಅನುದಾತ್ತ/ಸ್ವರಿತ/ದೀರ್ಘಸ್ವರಿತ) ಸಂಹಿತಾ ಮಂತ್ರಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಅಂತರ್ಜಾಲದಲ್ಲಿ ಎಲ್ಲರಿಗೂ ದೊರಕುವಂತೆ ಮಾಡಿದ ನನ್ನ ಪ್ರಯತ್ನವೇ ಈ ಜಾಲತಾಣ. ಸಾಂಪ್ರದಾಯಿಕವಾಗಿ ಚಾಲ್ತಿಯಲ್ಲಿರುವಂತೆ ಮಂಡಲ ಹಾಗು ಅಷ್ಟಕ ಎಂಬ ಎರಡು ವರ್ಗೀಕರಣ ಕ್ರಮದಲ್ಲಿ ಗಣಕೀಕೃತವಾಗಿ (ಕಂಪ್ಯೂಟರ್ ಪ್ರೋಗ್ರಾಮ್) ಮೂಲಕ ಅಕ್ಷರಗಳಿಗೆ ದೀರ್ಘ ಸ್ವರಿತವನ್ನು ಸೇರಿಸಿ ನಾಲ್ಕು ಸ್ವರೂಪಗಳಲ್ಲಿ ಮಂತ್ರಪುಟಗಳನ್ನು ಪ್ರಕಾಶನ ಮಾಡುತ್ತಿದ್ದೇನೆ.
ಸ್ವರೂಪ-೧ (Format-1) ರಲ್ಲಿ ಸಾಮಾನ್ಯವಾಗಿ ಇತ್ತೀಚಿನ ಪುಸ್ತಕಗಳಲ್ಲಿರುವಂತೆ ಸಂಹಿತಾ ಮಂತ್ರದ ಪದಗಳನ್ನು ಪ್ರತ್ಯೇಕಿಸಿ, ರಚಿಸಿದ್ದೇನೆ. ಇದನ್ನು “ಪದಚ್ಛೇದ ಪೂರ್ವಕ ಮಂತ್ರ ಪಾಠ” ಎಂದು ಕರೆಯುತ್ತಾರೆ. ಸ್ವರೂಪ-೨ರಲ್ಲಿ (Format-2) ಪರಂಪರಾಗತವಾಗಿ ಬಂದ ಮೂಲ ಸಂಹಿತಾಪಾಠದಂತೆ, ಪದಗಳನ್ನು ಪ್ರತ್ಯೇಕಿಸದೇ ಒಟ್ಟಾಗಿಸಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಇದರ ಜೊತೆಗೆ ಸ್ವರೂಪ-೨ರಲ್ಲಿ ಪದ ಪ್ರತ್ಯೇಕತೆಯನ್ನು ಗುರುತಿಸಲು ಪರ್ಯಾಯ ಪದಗಳನ್ನು ಭಿನ್ನ ಬಣ್ಣಗಳಿಂದ ಕೋಡ್ ಮಾಡಿದ್ದೇನೆ. ಸ್ವರೂಪ-೩ನ್ನು (Format-3) ಪುಸ್ತಕ ಮುದ್ರಣ ಮಾಡಲು ಅನುಕೂಲವಾಗಲೆಂದು ರಚಿಸಿದ್ದೇನೆ. ಸ್ವರೂಪ-೪ರಲ್ಲಿ (Format-4) ಅಗ್ನಿಮುಖ ಪ್ರಯೋಗದಲ್ಲಿ ಉಪಯೋಗಿಸುವ ಉದ್ದೇಶದಿಂದ ಮಂತ್ರಾಂತ್ಯದಲ್ಲಿ “ಸ್ವಾಹಾ”ಕಾರ ವನ್ನು ಸೇರಿಸಿ ಮಂತ್ರಗಳನ್ನು ಪ್ರಕಟಿಸುತ್ತಿದ್ದೇನೆ. ಪ್ರತಿಯೊಂದು ಸ್ವರೂಪದಲ್ಲೂ ಎರಡು ರೀತಿ ಪುಟಗಳಿವೆ. ಒಂದರಲ್ಲಿ ಪ್ರತೀ ಸಂಹಿತಾ ಮಂತ್ರದ ಕೆಳಗೆ ಪದಪಾಠದ ಮಂತ್ರಗಳನ್ನು ಸೇರಿಸಿ ಒಟ್ಟಾಗಿ ತೋರಿಸಿದ್ದೇನೆ. ಮತ್ತೊಂದರಲ್ಲಿ ಕೇವಲ ಸಂಹಿತಾ ಮಂತ್ರಗಳು ಮಾತ್ರ ಇವೆ.
Releasing Rigveda Samhita in 4 different formats (svaroopa) with svara (anudatta/svarita/dirgha-svarita) markings. Format-1 is shown as per most of the modern Rigveda books with word separation. Traditionally this format is called “Padachcheda pUrvaka”. Format-2 follows the traditional samhita pata where mantras do not show word separation also, this format is shown with alternate word color coding for clear distinguishment. Format-3 is similar to Format-2 but in printer friendly format. Format-4 has svahaakara at the end of each mantra which is beneficial during fire rituals. Each format has two types of pages, one showing Samhita mantras with PadapAta mantras and other just Samhita mantras without Pada mantras.
खिलमंत्राणि | ||
---|---|---|
पदच्छेद पूर्वक स्वरूप Format-1 | वर्णयुक्त स्वरूप Format-2 | |
ಪರಿಶಿಷ್ಟ (ಖಿಲ) परिशिष्ट (खिल) பரிஶிஷ்ட (கி²ல) పరిశిష్ట (ఖిల) പരിശിഷ്ട (ഖില) | ಪರಿಶಿಷ್ಟ (ಖಿಲ) परिशिष्ट (खिल) பரிஶிஷ்ட (கி²ல) పరిశిష్ట (ఖిల) പരിശിഷ്ട (ഖില) |
ನಿಮ್ಮಲ್ಲಿ ಯಾರಾದರೂ ಋಗ್ವೇದಾಧ್ಯಾಯಿಗಳು, ಕಲಿತ ಪಾಠವನ್ನು ಆವೃತ್ತಿ ಮಾಡಲು ಇಚ್ಛೆ ಇದ್ದರೆ ನನಗೆ ಇಮೇಲ್ ಮಾಡಿ ನಿಮ್ಮ ಫೋನ್ ನಂಬರ್ ತಿಳಿಸಿ. ನಾವು ಒಂದು ಸಣ್ಣ ಗುಂಪು ಮಾಡಿಕೊಂಡು ದಿನದಲ್ಲಿ ಒಂದು ವೇಳೆಯನ್ನು ನಿಗದಿಪಡಿಸಿಕೊಂಡು ಫೋನ್ ಯಾ ವಾಟ್ಸಾಪ್ ಮೂಲಕ ಕಲಿತ ಪಾಠವನ್ನು ಅಭ್ಯಾಸ ಮಾಡಿಕೊಳ್ಳಬಹುದು. ಕ್ಷಮಿಸಿ ಇದು ಹೊಸದಾಗಿ ಕಲಿಯುವವರಿಗೆ ಅಲ್ಲ ಹಾಗೂ ಸಧ್ಯಕ್ಕೆ ಇದು ಶೃಂಗೇರಿ ಶೈಲಿಯ ಉಚ್ಚಾರಣಾ ಕ್ರಮದಲ್ಲಿ ಪಾಠ ಕಲಿತವರಿಗೆ ಮಾತ್ರ ಸೀಮಿತಗೊಳಿಸುತ್ತಿದ್ದೇನೆ. ಇದಕ್ಕೆ ಯಾವುದೇ ರೀತಿಯ ಶುಲ್ಕವಿಲ್ಲ
If anyone is interested in practicing Rigveda Samhita (Sringeri style of chanting) on a regular basis over the phone (or whatsapp or anything), please reach out to me. We can discuss and set ourselves a plan of action. The only prerequisite is that the participants must be knowledgeable with Vedic Swaras and should be comfortable with chanting in Sringeri style. Please note, this is not for beginners who want to learn Rigveda, rather it’s for people who have learned from a teacher and are willing to practice.
**ದಯಾನಂದ ಐತಾಳ DAYANANDA AITHAL, **dithal29@gmail.com